ಶಿವಮೊಗ್ಗ, ಆ 17 (DaijioworldNews/HR): ಶಿವಮೊಗ್ಗದ ಭದ್ರಾವತಿ ತಾಲ್ಲೂಕು ಮಸರಹಳ್ಳಿ ಬಳಿ ರೈಲ್ವೆ ಹಳಿ ಸಮೀಪ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಮಹಿಳೆಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಶಿವಮೊಗ್ಗದಿಂದ ಬೆಳಿಗ್ಗೆ 11-20 ಕ್ಕೆ ಬಿಡುವ ಮೈಸೂರು ರೈಲು ಭದ್ರಾವತಿ ಮಾರ್ಗವಾಗಿ ಸಾಗುತ್ತಿದ್ದಾಗ ಮಹಿಳೆ ತನ್ನ ಮಗನ ಜೊತೆಯಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತಿದ್ದು, ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಅವರಿಗೆ ರೈಲು ಬರುವುದು ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಇನ್ನು ಮಹಿಳೆ ತಲೆಗೆ ರೈಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.