ನವದೆಹಲಿ, ಆ 17 (DaijioworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ವಿರುದ್ಧದ ಅರ್ಜಿ ವಿಚಾರಣೆಯಲ್ಲಿ ಇಡಿ ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಮುಂದಿನ ತಿಂಗಳು ದಾಖಲೆ ನೀಡುವುದಾಗಿ ಹೇಳಿದ್ದು, ದಾಖಲೆ ನೀಡಿದ ಬಳಿಕ ನಾನು ಮಾತನಾಡುತ್ತೇನೆ. ಸಮಯ ಸಿಕ್ಕರೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದರು.
ಇನ್ನು ನ್ಯಾಯಾಲಯಕ್ಕಕೆ ಗೌರವ ಕೊಟ್ಟು ಇಂದು ವಿಚಾರಣೆ ಹಾಜರಾಗಿದ್ದೆ. ನ್ಯಾಯಾಲಯವು ಕೆಲ ದಾಖಲೆಗಳನ್ನು ಇಡಿ ಅಧಿಕಾರಿಗಳ ಬಳಿ ಕೇಳಿದೆ. ಅವರು ದಾಖಲೆಗಳನ್ನು ಕೊಟ್ಟ ನಂತರ ನಾನು ಪ್ರತಿಕ್ರಿಯಿಸುತ್ತೇನೆ. ಸದ್ಯಕ್ಕೆ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ ಎಂದು ಹೇಳಿದ್ದಾರೆ.