ನವದೆಹಲಿ, ಆ 16 (DaijiworldNews/MS): ಬಿಜೆಪಿ ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಇದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನ ನೀಡುವ ಮೂಲಕ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದೆ. ಇನ್ನು ಸಂಸದೀಯ ಸಮಿತಿಗೆ ರಾಜ್ಯದವರೇ ಆದ ಬಿ.ಎಲ್ ಸಂತೋಷ್ ಅವರನ್ನೂ ಸೇರ್ಪಡೆಗೊಳಿಸಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರು ಇಳಿದ ಬಳಿಕ ಬಿಜೆಪಿಯಲ್ಲಿ ಅವರಿಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ ಎಂಬ ಅಸಮಾಧಾನ ಬೆಂಬಲಿಗರಿಂದ ಕೇಳಿ ಬರುತ್ತಿತ್ತು. ಇದೀಗ ೧೧ ಮಂದಿಯ ಸದಸ್ಯರಲ್ಲಿ ಯಡಿಯೂರಪ್ಪ ಅವರಿಗೂ ಸ್ಥಾನ ಸಿಕ್ಕಿದೆ.
ಇನ್ನು ಹಿರಿಯ ನಾಯಕರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿಯ ಪ್ರಮುಖ ಸಮಿತಿಯಿಂದ ಕೈಬಿಡಲಾಗಿದೆ.