ಬೆಂಗಳೂರು, ಆ 17 (DaijioworldNews/HR): ಪಿಎಸ್ಐ ಅಧಿಕಾರಿಯಾಗಲು ಆಗಲಿಲ್ಲವೆಂದು ನಕಲಿ ಪೊಲೀಸ್ ಆಗಿ ಕಳ್ಳತನ ಹಾಗೂ ಸುಲಿಗೆಗೆ ಇಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿನಯ್ ಕುಮಾರ್(23) ಎಂದು ಗುರುತಿಸಲಾಗಿದೆ.
ವಿನಯ್ ಕುಮಾರ್ ಪಿಎಸ್ ಐ ಆಗಲು ತಯಾರಿ ನಡೆಸಿದ್ದು, ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಟಾಫರ್ ಆಗಿದ್ದನು. ಆದರೆ ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಅಂತ ಕಳವು ಮಾಡಲಾರಂಭಿಸಿದ್ದಾನೆ ಎನ್ನಲಾಗಿದೆ.
ಇನ್ನು ಈತ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡುತ್ತಿದ್ದು, ಈ ವಿಷಯ ತಿಳಿದು ಪೊಲೀಸರು ಆತನನ್ನು ಬಂಧಿಸಿದ್ದಾರೆ.