ನವದೆಹಲಿ, ಆ 17 (DaijioworldNews/HR): 215 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಆರೋಪಿ ಎಂದು ಹೆಸರಿಸಿರುವುದಾಗಿ ವರದಿಯಾಗಿದೆ.
215 ಕೋಟಿ ಸುಲಿಗೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಅವರನ್ನು ಇ.ಡಿ ವಿಚಾರಣೆ ನಡೆಸುತ್ತಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ಸುಲಿಗೆ ಹಣದ ಫಲಾನುಭವಿ ಎಂದು ಇ.ಡಿ ಹೇಳಿರುವುದಾಗಿ ವರದಿಯಾಗಿದೆ.
ಇನ್ನು 2021ರ ಡಿಸೆಂಬರ್ನಲ್ಲಿ ಸುಕೇಶ್ ಚಂದ್ರಶೇಖರ್ ಅವರ ಆಪ್ತ ಪಿಂಕಿ ಇರಾನಿ ಅವರನ್ನು ಇ.ಡಿ ಬಂಧಿಸಿದ್ದು, 2022ರ ಫೆಬ್ರವರಿಯಲ್ಲಿ, ಈತನ ವಿರುದ್ಧ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಆರೋಪಿ ಸುಖೇಶ್ ವಿವಿಧ ಮಾಡೆಲ್ಗಳು ಮತ್ತು ಬಾಲಿವುಡ್ ನಟರಿಗಾಗಿ ಸುಮಾರು 20 ಕೋಟಿಯನ್ನು ಖರ್ಚು ಮಾಡಿದ್ದಾನೆ ಎಂದು ತಿಳಿದು ಬಂದಿದೆ.