ಬೆಂಗಳೂರು, ಆ 16 (DaijiworldNews/MS): ಸರ್ಕಾರಿ ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅನುಮತಿ ನೀಡಿರುವ ಬೆನ್ನಲ್ಲೇ ಇದಕ್ಕೆ ಅಪಸ್ವರ ಎದ್ದಿದೆ.
ರಾಜ್ಯದಲ್ಲಿ ಧರ್ಮ - ಜಾತಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಇಂತಹ ಸನ್ನಿವೇಶದಲ್ಲಿ ಈ ಅನುಮತಿ ಅಗತ್ಯವಿತ್ತೇ ಎಂದು ಶಿಕ್ಷಕ ವೃಂದ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ರಾಜ್ಯ ಸರ್ಕಾರ ಈ ಕ್ರಮವನ್ನು ಪ್ರಶ್ನಿಸಿ, ಶುಕ್ರವಾರ ದಿನ ನಮಗೂ ನಮಾಜ್ ಗೆ ಅವಕಾಶ ಮಾಡಿ ಕೊಡಿ. ಶಾಲೆಯಲ್ಲಿ ಹಿಜಾಬ್ ಬೇಡ ಎಂದು ಹೇಳಿ ಈಗ ಗಣೇಶ ಪ್ರತಿಷ್ಠಾಪನೆ ಹೇಗೆ ಮಾಡುತ್ತೀರಿ ಎಂದು ಶಿಕ್ಷಣ ಸಚಿವರಿಗೆ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.