ಬಿಹಾರ, ಆ 17 (DaijiworldNews/DB): ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಜೆಡಿಯುವಿನಿಂದ ಆರ್ಸಿಪಿ ಸಿಂಗ್ ಅವರನ್ನು ಕೇಂದ್ರ ಸಂಪುಟಕ್ಕೆ ಅನುಮೋದಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವುದಾಗಿ ತಿಳಿದು ಬಂದಿದೆ.
ಕೇಂದ್ರ ಸಂಪುಟದಲ್ಲಿ ಜೆಡಿಯು ಪ್ರತಿನಿಧಿಯಾಗಿ ಸಿಂಗ್ ಆಯ್ಕೆಯನ್ನು ಅನುಮೋದಿಸಿಲ್ಲ ಎಂಬ ನಿತೀಶ್ಕುಮಾರ್ ಆಟೋಪಕ್ಕೆ ಬಿಹಾರದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಕ್ರಿಯಿಸಿದ ಶಾ, ಅವರ ಸುಳ್ಳು ಹೇಳುತ್ತಿದ್ದಾರೆ. ಎರಡು ಕ್ಯಾಬಿನೆಟ್ ಸ್ಥಾನಗಳನ್ನು ನಿತೀಶ್ಕುಮಾರ್ ಕೇಳಿದ್ದರು. ಆದರೆ ಬಿಜೆಪಿ ಒಂದನ್ನು ಮಾತ್ರ ನೀಡಬಹುದೆಂದು ತಿಳಿಸಿದ್ದಾಗ ಅವರು ಸಿಂಗ್ ಹೆಸರನ್ನು ಅನುಮೋದನೆ ಮಾಡಿದ್ದರು. ಆ ಬಳಿಕ ನಿಮ್ಮ ಬೇಡಿಕೆ ಬಗ್ಗೆ ಮರು ಚಿಂತನೆ ಮಾಡುವುದಾಗಿ ನಾನು ಅವರಿಗೆ ಭರವಸೆ ನೀಡಿದ್ದೆ ಎಂದರು.
ಬಿಹಾರದಲ್ಲಿ ಈ ಹಿಂದೆ ಬಿಜೆಪಿ-ಜೆಡಿಯು ಮೈತ್ರಿಯನ್ನು ಕೊನೆಗೊಳಿಸುವಲ್ಲಿ ಆರ್ಸಿಪಿ ಸಿಂಗ್ ಅವರುಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ರಾಜ್ಯಸಭಾ ಸಂಸದ ಹಾಗೂ ಕೇಂದ್ರ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ಭ್ರಷ್ಟಾಚಾರದ ಆರೋಪದಲ್ಲಿ ಮುಂದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಬಳಿಕ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿದ್ದರು.