ಗುವಾಹಟಿ, ಆ 17 (DaijioworldNews/HR): ಅಸ್ಸಾಂನ ಅಸ್ಸಾಂ ಸೋನಿತ್ಪುರ ಜಿಲ್ಲೆಯ ರಂಗಪಾರದ ದೋಯಲೂರು ಪ್ರದೇಶಲ್ಲಿ ವ್ಯಕ್ತಿಯೊಬ್ಬ ಫುಟ್ಬಾಲ್ ಪಂದ್ಯದ ಮೇಲೆ ಕಟ್ಟಿದ್ದ 500 ರೂಪಾಯಿ ಬೆಟ್ಟಿಂಗ್ ವಿಚಾರಕ್ಕೆ ನಡೆದ ಗಲಾಟೆ ವೇಳೆ ತನ್ನ ಸಹ ಗ್ರಾಮಸ್ಥನ ತಲೆ ತುಂಡರಿಸಿ, ಅದನ್ನು ಹಿಡಿದುಕೊಂಡು 25 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೋಯಲೂರು ಪ್ರದೇಶಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿದ್ದು, ಈ ಪಂದ್ಯದ ಮುಗಿದ ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.
ಇನ್ನು ಹೇಮ್ ರಾಮ್ ಎಂಬಾತ ಬೆಟ್ಟಿಂಗ್ನಲ್ಲಿ ಗೆದ್ದು, ತುನಿರಾಮ್ ಮ್ಯಾಡ್ರಿ ಬಳಿ ಹಣ ಕೇಳಿದ್ದ. ಆದರೆ ತಾನು ಕೊಟ್ಟಿದ್ದ ಮಾತನ್ನು ಮ್ಯಾಡ್ರಿ ಉಳಿಸಿಕೊಳ್ಳಲಿಲ್ಲ. ಬದಲಾಗಿ ಊಟಕ್ಕೆ ಹೋಗೋಣ ಎಂದು ಕರೆದಿದ್ದ. ಆದರೆ ರಾಮ್ ಮಾತ್ರ ಹಣಕ್ಕಾಗಿ ಮ್ಯಾಡ್ರಿ ಬಳಿ ಒತ್ತಾಯಿಸುತ್ತಲೇ ಇದ್ದ. ಇದರಿಂದ ಆಕ್ರೋಶಗೊಂಡು ಮ್ಯಾಡ್ರಿ ತನ್ನ ಬ್ಯಾಗ್ನಲ್ಲಿದ್ದ ಹರಿತವಾದ ಆಯುಧವನ್ನು ತೆಗೆದುಕೊಂಡು ರಾಮ್ ತಲೆಯಲ್ಲು ತುಂಡರಿಸಿದ್ದಾರೆ.
ರಾಮ್ ತಲೆಯನ್ನು ಮ್ಯಾಡ್ರಿ ಹಿಡಿದು ರಂಗಪರಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.