ನವದೆಹಲಿ, ಆ 17 (DaijioworldNews/HR): ಹುಟ್ಟುಹಬ್ಬದ ಪಾರ್ಟಿ ವೇಳೆ ಬಾಲಕನೊಬ್ಬನಿಗೆ ರಾಡ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮದನ್ಪುರ ಖಾದರ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರಿತಾ ವಿಹಾರ್ ನಿವಾಸಿಯಾದ 15 ವರ್ಷದ ಫೈಜಾನ್ ಹತ್ಯೆಯಾದ ಬಾಲಕನಾಗಿದ್ದು, ಬಂಧಿತನನ್ನು ಮೋನು (18 ) ಎಂದು ಗುರುತಿಸಲಾಗಿದೆ.
ಇನ್ನು ಮೃತ ಬಾಲಕ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದು, ಈ ವೇಳೆ ರಾಡ್ ನಿಂದ ಹೊಡೆದಿದ್ದರು, ಸರಿತಾ ವಿಹಾರ್ ಬಳಿ ಪತ್ತೆಯಾಗಿದ್ದನು. ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮೋನು ಕ್ಯಾಂಪ್ನ ನಿವಾಸಿಯಾಗಿದ್ದು, ಮೊಟ್ಟೆ ಅಂಗಡಿಯನ್ನು ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.