ಮಹಾರಾಷ್ಟ್ರ, ಆ 17 (DaijioworldNews/HR): ಮಹಾರಾಷ್ಟ್ರದ ಗೊಂಡಿಯಾದಲ್ಲಿ ರೈಲಿನ 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 50 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲು- ಭಗತ್ ಕಿ ಕೋಠಿ, ಸಿಗ್ನಲ್ ಸಿಗದ ಕಾರಣ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ರೈಲು ಛತ್ತೀಸ್ ಗಢದ ಬಿಲಾಸ್ ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ಹೋಗುತ್ತಿದ್ದಾಗ ಈ ಅವಗಢ ಸಂಭಂವಿಸಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.