ಬೆಂಗಳೂರು, ಆ 16 (DaijiworldNews/DB): ತಳ್ಳಿಕೊಂಡು ಹೋಗ್ತಿರುವ ಬಿಜೆಪಿ ಸರ್ಕಾರದಲ್ಲಿಎಂಎಂಎಸ್ಗಳು ಹೊರಬರುತ್ತಲೇ ಇರುತ್ತವೆ! ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ಸಿಂಎಂ 'ಮ್ಯಾನೇಜ್' ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ ಎಂಎಂಎಸ್ಗಳು ಒಂದೆಡೆಯಾದರೆ, ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟದಲ್ಲಿರುವ ಎಂಎಂಎಸ್ಗಳು ಮತ್ತೊಂದೆಡೆ! ಎಂ-ಮುನಿರತ್ನ, ಎಂ-ಮಾಧುಸ್ವಾಮಿ, ಎಸ್-ಸೋಮಶೇಖರ್! ಎಂಬುದಾಗಿ ಹೇಳಿದೆ.
ರಾಜ್ಯ ಕಂಡ ಕಳಪೆ ಸರ್ಕಾರ ಇದು ಎನ್ನಲು ಒಂದಷ್ಟು ಪುರಾವೆಗಳಿವೆ. ಸಚಿವರು ಕೆಲಸ ಮಾಡ್ತಿಲ್ಲ - ಸಿಎಂ ರಾಜಕೀಯ ಕಾರ್ಯದರ್ಶಿ, ಸಹಕಾರ ಸಚಿವರು ಕೆಲಸ ಮಾಡ್ತಿಲ್ಲ - ಮಾಧುಸ್ವಾಮಿ, ಕಾನೂನು ಸಚಿವರು ಕೆಲಸ ಮಾಡ್ತಿಲ್ಲ - ಎಸ್.ಟಿ ಸೋಮಶೇಖರ್, ಮಾಧುಸ್ವಾಮಿ ರಾಜೀನಾಮೆ ಕೊಡಲಿ - ಮುನಿರತ್ನ. ಇದು ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟವಾಗಿದ್ದು, ಈ ಕಿತ್ತಾಟದಲ್ಲಿ ಎಲ್ಲವೂ ಹೊರ ಬರುತ್ತಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.