ಶಿವಮೊಗ್ಗ, ಆ 16 (daijiworldNews/HR): ಶಿವಮೊಗ್ಗದಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಭಜರಂಗ ದಳದ ಕಾರ್ಯಕರ್ತ ಸುನೀತ್ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಮುಬಾರಕ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭದ್ರಾವತಿ ನಗರದ ನೆಹರೂ ಬಡವಾಣೆಯಲ್ಲಿ ಭಜರಂಗ ದಳದ ಕಾರ್ಯಕರ್ತ ಸುನೀತ್ ಎಂಬಾತನನ್ನು ಚಾಕುವಿನಿಂದ ಇರಿಯಲು ಮುಬಾರಕ್ ಎಂಬಾತ ಹಲ್ಲೆ ಗೈದು ತಲೆಮರೆಸಿಕೊಂಡಿದ್ದಾನೆ.
ಇನ್ನು ಗಾಯಾಳು ಸುನೀಲ್ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ.