ಮುಂಬೈ, ಆ 16 (DaijiworldNews/MS): ಬಾಲಿವುಡ್ನ ಜನಪ್ರಿಯ ಗಾಯಕ-ಸಂಯೋಜಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಓಶಿವಾರಾ ಪೊಲೀಸ್ ಠಾಣೆಯಲ್ಲಿ30 ವರ್ಷದ ಮಹಿಳೆಯೊಬ್ಬರು ರಾಹುಲ್ ವಿರುದ್ಧ ದೂರು ನೀಡಿದ್ದು, ತಮ್ಮ ಮೇಲೆ ರಾಹುಲ್ ಜೈನ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಮಹಿಳೆಯನ್ನು ರಾಹುಲ್ ಸಂಪರ್ಕಿಸಿ ಆಕೆಯ ಕೆಲಸವನ್ನು ಶ್ಲಾಘಿಸಿದ್ದಾರೆ ಆ ಬಳಿಕ ಉಪನಗರ ಅಂಧೇರಿಯಲ್ಲಿನ ಬಹುಮಹಡಿಯಲ್ಲಿರುವ ತನ್ನ ಫ್ಲಾಟ್ಗೆ ಭೇಟಿ ನೀಡುವಂತೆ ಆತ ಆಕೆಯನ್ನು ಕೇಳಿಕೊಂಡಿದ್ದು, ಆಕೆಯನ್ನು ಪರ್ಸನಲ್ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ನೇಮಿಸಿಕೊಳ್ಳುವುದಾಗಿ ಭರವಸೆ ನೀಡಿ ಮಹಿಳೆಗೆ ಆಫರ್ ನೀಡಿದ್ದಾರೆ.
ಆಗಸ್ಟ್ 11 ರಂದು ರಾಹುಲ್ ಮನೆಗೆ ಭೇಟಿ ನೀಡಿದ ನಂತರ, ಮನೆ ತೋರಿಸುವ ನೆಪದಲ್ಲಿ ತನ್ನ ಮಲಗುವ ಕೋಣೆಗೆ ತನ್ನೊಂದಿಗೆ ಬರುವಂತೆ ಹೇಳಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ರಾಹುಲ್ ವರ್ತನೆಯನ್ನು ವಿರೋಧಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿ, ನಂತರ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಎಂದು ಮಹಿಳೆ ಹೇಳಿದ್ದಾರೆ.
ಇನ್ನು ಈ ಆರೋಪದ ಬಗ್ಗೆ ರಾಹುಲ್ ಜೈನ್ ಪ್ರತಿಕ್ರಿಯೆ ನೀಡಿದ್ದು, 'ಇದೆಲ್ಲವೂ ಆಧಾರರಹಿತ ಹಾಗೂ ಸುಳ್ಳು..ಆಕೆಯ ಪರಿಚಿಯ ನನಗಿಲ್ಲ ' ಎಂದಿದ್ದಾರೆ.