ಬೆಂಗಳೂರು, ಆ 16 (daijiworldNews/HR): ಸಿದ್ದರಾಮಯನವರು ಸ್ವತಂತ್ರ ಭಾರತದ ಜಿನ್ಹಾ, ಮುಸ್ಲಿಂ ಏರಿಯಾಗಳನ್ನು ಈ ದೇಶದ ಅಖಂಡತೆಯಿಂದ ಛಿದ್ರಗೊಳಿಸುವುದಕ್ಕೆ ಹೊರಟಿದ್ದೀರಾ? ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಸಿದ್ದರಾಮಯ್ಯ ಬೀದಿಗೆ ಬಿಟ್ಟ ರಕ್ತಬೀಜಾಸುರರೇ ಶಿವಮೊಗ್ಗದಲ್ಲಿ ಗಲಾಟೆ ಸೃಷ್ಟಿಸಿದ್ದು ಎಂಬ ಗುಮಾನಿ ಈಗ ಸತ್ಯವಾಗಿದೆ. ಜಿಹಾದಿ ಮಾನಸಿಕತೆಯ ಉಗ್ರರ ಪರವಾಗಿ ಸಿದ್ದರಾಮಯ್ಯ ವಕಾಲತ್ತು ವಹಿಸುವುದರಲ್ಲಿ ಅಚ್ಚರಿಯಿಲ್ಲ ಎಂದಿದೆ.
ಇನ್ನು ಟಿಪ್ಪುವಿನ ಫೋಟೋ ಎಲ್ಲಿ ಬೇಕಾದರೂ ಹಾಕಬಹುದು ಆದರೆ ಸಾವರ್ಕರ್ ಫೋಟೋ ಹಾಕಲು ಮಾತ್ರ ಸಿದ್ದರಾಮಯ್ಯ ಅವರಿಗೆ ಧರ್ಮ ಅಡ್ಡ ಬರುತ್ತದೆ. ಓಲೈಕೆ ರಾಜಕಾರಣದ ಪರಮಾವಧಿಯಿದು. ಜಿಹಾದಿ ಮಾನಸಿಕತೆಯನ್ನು ಕಾಂಗ್ರೆಸ್ ಪಕ್ಷ ಬೆಳೆಸುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಆಕೋಶ ವ್ಯಕ್ತಪಡಿಸಿದೆ.