ಶಿವಮೊಗ್ಗ, ಆ 16 (daijiworldNews/HR): ಶಿವಮೊಗ್ಗದಲ್ಲಿ ನಡೆದ ಫೆಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆಯದಿದ್ದು, 50 ರಿಂದ 60 ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ನಗರದಲ್ಲಿ ಅನುಮಾನ್ಸದ ರೀತಿಯಲ್ಲಿ ಓಡಾಡೋ ವ್ಯಕ್ತಿ ಬಗ್ಗೆ ತೀವ್ರ ನಿಗಾ ಇಡಾಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲಾ ಕಡೆ ವಾಹನಗಳನ್ನು ಪರಿಶೀಲನೆ ಮಾಡಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಎರಡು ಗುಂಪುಗಳ ಮಧ್ಯೆ ವೀರ್ ಸಾವರ್ಕರ್ ಫ್ಲೆಕ್ಸ್, ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ವ್ಯಕ್ತಿಗೆ ಚಾಕು ಇರಿತ ಉಂಟಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಂತಿ ಹದಗೆಟ್ಟಿತ್ತು.