ರಾಮನಗರ, ಆ 16 (DaijiworldNews/DB): ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದ್ದು, ಸಂಘರ್ಷಗಳೂ ಜಾಸ್ತಿಯಾಗುತ್ತಿವೆ. ಸಹೋದರ ಬಾಂಧವ್ಯವನ್ನು ಬಿಜೆಪಿ ಕಲುಷಿತಗೊಳಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ಮಾಡುವ ಕೆಲಸದ ಬದಲು ಅಶಾಂತಿ ಸೃಷ್ಟಿಯನ್ನೇ ಮಾಡುತ್ತಿದೆ ಎಂದು ಅವರು ದೂರಿದರು.
ಶಿವಮೊಗ್ಗದಲ್ಲಿ ವಿ.ಡಿ. ಸಾವರ್ಕರ್ ಫ್ಲೆಕ್ಸ್ ವಿವಾದ ತಾರಕಕ್ಕೇರಿದ್ದು, ಇಬ್ಬರಿಗೆ ಚಾಕು ಇರಿತದ ಘಟನೆ ನಡೆದಿದೆ. ಸದ್ಯ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.