ಶ್ರೀನಗರ, ಆ 16 (DaijiworldNews/DB): ಶ್ರೀನಗರದ ಕಾಶ್ಮೀರ ಪೊಲೀಸ್ ನಿಯಂತ್ರಣ ಕೊಠಡಿಯ ಮೇಲೆ 75ನೇ ಸ್ವಾತಂತ್ರ್ಯ ದಿನಾಚರಣೆಂದೇ ಭಯೋತ್ಪಾದಕರು ಗ್ರೆನೇಡ್ ದಾಳಿ ಮಾಡಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸೋಮವಾರ ಇಡೀ ದೇಶವೇ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ನಡೆದಿದೆ. ಒಂದೇ ಗಂಟೆಯಲ್ಲಿ ಇದು ಎರಡನೇ ಗ್ರೆನೇಡ್ ದಾಳಿಯಾಗಿದ್ದು, ಓರ್ವ ಪೊಲೀಸ್ ಸಿಬಂದಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಬದ್ಗಾಂನ ಗೋಪಾಲ್ಪೋರಾ ಚಡೂರಾ ಪ್ರದೇಶದಲ್ಲಿ ಉಗ್ರರು ಗ್ರೆನೇಡ್ ಎಸೆದಿದ್ದರು. ಇದು ಕರಣ್ ಕುಮಾರ್ ಸಿಂಗ್ ಎಂಬ ವ್ಯಕ್ತಿಗೆ ತಾಗಿ ಅವರು ಗಾಯಗೊಂಡರು. ಕೂಡಲೇ ಅವರನ್ನ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.