ಶಿವಮೊಗ್ಗ, ಆ 16 (DaijiworldNews/MS): ಶಿವಮೊಗ್ಗ ನಗರದಲ್ಲಿ ನಡೆದ ಬ್ಯಾನರ್ ವಿವಾದ, ಚಾಕು ಇರಿತ ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ , "ಇತಿಹಾಸ ಗೊತ್ತಿಲ್ಲದ ಕೆಲ ಪುಢಾರಿಗಳು ಇಂಥಾ ಕೃತ್ಯ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
ಚಾಕು ಇರಿತ ಪ್ರಕರಣ ಸಂಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ, ಐಸಿಯುನಲ್ಲಿ ಪ್ರೇಮ್ಕುಮಾರ್ನಲ್ಲಿ ಆರೋಗ್ಯ ವಿಚಾರಿಸಿದ ಬಳಿಕ " ದೇವರು ದೊಡ್ಡವನು, ಪ್ರೇಮ್ ಸಿಂಗ್ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಸಾವರ್ಕರ್ ಪ್ಲೆಕ್ಸ್ ನಿಂದ ಗಲಾಟೆ ನಡೆದಿದ್ದು ಖಂಡಿಸುತ್ತೇನೆ. ಇತಿಹಾಸ ಗೊತಿಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಚಾರ ಮಾಡಿದ್ದಾರೆ. ದೇಶದ ಸ್ವಾಭಿಮಾನಿ ಭಾರತೀಯರಿಗೆ ನೋವಾಗಿದೆ. ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಇದು ಪುನರಾವರ್ತನೆ ಆಗುತ್ತಿದೆ . ಶಾಂತಿ ಕೆಡಿಸುವ ದೊಡ್ಡ ಪಿತೂರಿ ನಡೆಯುತ್ತಿದ್ದು, ನಿನ್ನೆ ಮೊನ್ನೆ ಕ್ರಿಕೆಟ್ ಆಡಿಕೊಂಡಿದ್ದವರು ಚಾಕು ಹಿಡಿದಿದ್ದಾರೆ. ನಮ್ಮ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.