ಸಿಯಾಚಿನ್, ಆ 15 (DaijiworldNews/HR): 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬರ ಮೃತದೇಹ ಪತ್ತೆಯಾಗಿದ್ದು, ಅವರನ್ನು 19 ಕುಮಾವ್ ರೆಜಿಮೆಂಟ್ನ ಚಂದ್ರಶೇಖರ್ ಹರ್ಬೋಲಾ ಎಂದು ಗುರುತಿಸಲಾಗಿದೆ.
1984 ರಲ್ಲಿ ಚಂದ್ರಶೇಖರ್ ಹರ್ಬೋಲಾ ಅವರು ಪಾಕಿಸ್ತಾನ ವಿರುದ್ಧ ಹೋರಾಡಲು 'ಆಪರೇಷನ್ ಮೇಘದೂತ್' ಗಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಕಳುಹಿಸಲ್ಪಟ್ಟ 20 ಸದಸ್ಯರ ಸೈನ್ಯದ ಭಾಗವಾಗಿದ್ದರು.
ಇನ್ನು 'ಆಪರೇಷನ್ ಮೇಘದೂತ್' ವೇಳೆ ನಾಪತ್ತೆಯಾದ 15 ಸೈನಿಕರ ಶವಗಳು ಪತ್ತೆಯಾಗಿದ್ದು, ಐವರ ಶವಗಳು ಪತ್ತೆಯಾಗಿರಲಿಲ್ಲ. ಅವರಲ್ಲಿ ಇದೀಗ ಹರ್ಬೋಲಾ ಅವರ ಮೃತದೇಹ ಪತ್ತೆಯಾಗಿದೆ.