ಶಿವಮೊಗ್ಗ, ಆ 15 (DaijiworldNews/HR): ಸಾವರ್ಕರ್ ಮತ್ತು ಟಿಪ್ಪು ಫೋಟೋ ವಿಷಯಕ್ಕೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ಯುವಕನೊಬ್ಬನಿಗೆ ಚಾಕು ಇರುದ ಘಟನೆ ಉಪ್ಪಾರ ಕೇರಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಶಿವಮೊಗ್ಗ ಮತ್ತು ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದು, ನಗರದಲ್ಲಿ ಆಗಸ್ಟ್ 18ರ ಸಂಜೆವರೆಗೂ ನಿಷೇಧಾಜ್ಞೆ ಜಾರಿಯಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇನ್ನು ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ವೀರ್ ಸಾವರ್ಕರ್ ಅವರ ಫ್ಲೆಕ್ಸ್ ಅನ್ನು ಹಿಂದೂ ಯುವಕರು ಹಾಕಿದ್ದು, ಅದನ್ನು ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು ಇನ್ನೊಂದು ಗುಂಪು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಸಾವರ್ಕರ್ ಫೋಟೋ ತೆರವು ಮಾಡಿದರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೊ ಇಡಲು ಪೊಲೀಸರು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ಆರಂಭವಾಗಿದೆ.
ಎರಡು ಕೋಮಿನವರಿಗೆ ಶಾಂತವಾಗಿರಲು ಪೊಲೀಸರು ಸೂಚನೆ ನೀಡಿದ್ದು, ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ಆರಂಭವಾಗಿ ಗುಂಪು ಚದರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ದು, ಇದರ ಮಧ್ಯೆ ಯುವಕನೊಬ್ಬನಿಗೆ ಚೂರಿ ಇರಿದಿರುವ ಘಟನೆ ಕೂಡ ನಡೆದಿದೆ.