ಶಿವಮೊಗ್ಗ, ಆ 15 (DaijiworldNews/HR): ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನಕ್ಕೆ ಎದುರುಗಡೆಯಿಂದ ಬರುತ್ತಿದ್ದಂತ ಮತ್ತೊಂದು ಕಾರು ಡಿಕ್ಕಿಯೊಡೆದಿರುವ ಘಟನೆ ಭದ್ರಾವತಿಯ ಜಂಕ್ಷನ್ ಬಳಿ ನಡೆದಿದೆ.
ಸಚಿವ ಅರಗ ಜ್ಞಾನೇಂದ್ರ ಅವರು ತುಮಕೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದು, ಈ ವೇಳೆಯಲ್ಲಿ ಎದುರುಗಡೆ ಬರುತ್ತಿದ್ದಂತ ಕಾರೊಂದು ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದೆ.
ಇನ್ನು ಕಾರಿಗೆ ಡ್ಯಾಮೇಜ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.