ಶ್ರೀನಗರ, ಆ 15 (DaijiworldNews/HR): ದೇಶವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದ್ದು, ಈ ಬಾರಿ ಕಾಶ್ಮೀರ ಜನತೆಯ ದೇಶ ಪ್ರೇಮ ಹಾಗೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿರುವ ರೀತಿ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ.
ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಕೆಲ ಯುವಕರು ಶ್ರೀನಗರದ ಲಾಲ್ ಚೌಕ್ಗೆ ಬಂದು ತ್ರಿವರ್ಣ ಧ್ವಜವನ್ನು ಹಾರಿಸಿ, ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಇನ್ನು ಯುವಕನೊಬ್ಬ ತ್ರಿವರ್ಣ ಬಣ್ಣವನ್ನು ತನ್ನ ದೇಹಕ್ಕೆ ಬಣ್ಣ ಬಳಿದುಕೊಂಡು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದು, ಉತ್ಸಾಹದಿಂದ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದು, ಇದು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ.