ಬೆಂಗಳೂರು, ಆ 15 (DaijiworldNews/MS): ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ಪಾಲಿಕೆ ವಾರ್ಡ್ಗಳ ಮೀಸಲಾತಿಯನ್ನು ಬಿಜೆಪಿ ಸಚಿವರು ತಮಗೆ ಬೇಕಾದಂತೆ ಪ್ರಕಟಿಸಿಕೊಂಡಿದ್ದಾರೆ. ಈ ಮೂಲಕ ಶಕ್ತಿ ಕುಗ್ಗಿಸುವ ಸಂಚು ನಡೆಸಿದ್ದು ಆದರೆ ನಾವು ತಕ್ಕ ಉತ್ತರ ನೀಡಬೇಕಿದೆ ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರ ನಮ್ಮ ಭದ್ರಕೋಟೆಯಾಗಿದ್ದು, ನಮ್ಮದೇ ಆದ ತಪ್ಪಿನಿಂದ ಈ ಹಿಂದೆ ಸೋಲು ಅನುಭವಿಸಿದ್ದೇವೆ. ಆದರೆ ಇದನ್ನು ತಿದ್ದಿಕೊಳ್ಳಬೇಕಾಗಿದ್ದು ಇನ್ಮುಂದೆ ಯುವಕರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.