ನವದೆಹಲಿ, ಆ 15 (DaijiworldNews/HR): ದೇಶದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ದೇಶವಾಸಿಗಳಿಗೆ ಶುಭಾಶಯಗಳು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವಕ್ಕಾಗಿ ನಾನು ವಿಶ್ವದಾದ್ಯಂತ ಹರಡಿರುವ ಭಾರತದ ಪ್ರೇಮಿಗಳನ್ನು, ಭಾರತೀಯರನ್ನು ಅಭಿನಂದಿಸುತ್ತೇನೆ ಎಂದರು.
ಸ್ವಾತಂತ್ರ್ಯಕ್ಕಾಗಿ ಮಂಗಲ್ ಪಾಂಡೆ, ವೀರ ಸಾವರ್ಕರ್, ಭಗತ್ ಸಿಂಗ್, ಗಾಂಧೀಜಿ, ಜವಹಾರ್ ಲಾಲ್ ನೆಹರೂ ಸೇರಿದಂತೆ ಹಲವರು ದೇಶದ ಹೋರಾಡಿದ್ದರು. ದೇಶದ ನಾರಿ ಶಕ್ತಿ ಏನ್ನು ಅನ್ನೋದು ಸ್ವಾತಂತ್ರ್ಯ ಹೋರಾಟದಲ್ಲಿ ಸಾಬೀತಾಗಿದೆ ಎಂದಿದ್ದಾರೆ.
ಇನ್ನು 'ಆಜಾದಿ ಮಹೋತ್ಸವ'ದ ಸಮಯದಲ್ಲಿ, ನಾವು ನಮ್ಮ ಅನೇಕ ರಾಷ್ಟ್ರೀಯ ನಾಯಕರನ್ನು ನೆನಪಿಸಿಕೊಂಡಿದ್ದು, ವಿಭಜನೆಯ ಭೀಕರತೆಯನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.