ಹಾವೇರಿ, ಆ 14 (DaijioworldNews/HR): ಮಹಾತ್ಮಾ ಗಾಂಧೀಜಿ ಅವರ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿನವರು ನಕಲಿ ಗಾಂಧಿವಾದಿಗಳು. ಡ್ಯುಪ್ಲಿಕೇಟ್ ಕಾಂಗ್ರೆಸ್ ಪಕ್ಷ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟ ನಡೆಸಿಲ್ಲ ಎನ್ನಲು, ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಯಾವ ಅಧಿಕಾರ, ನೈತಿಕತೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದಿದ್ದಾರೆ.
ಇನ್ನು ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಬಾರದಿತ್ತು. ಈಗಿರುವುದು ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಲ್ಲ, ಇಂದಿರಾ ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.