ಚಿಕ್ಕಬಳ್ಳಾಪುರ, ಆ 14 (DaijiworldNews/DB): ಆನ್ಲೈನ್ ಅಪ್ಲಿಕೇಶನ್ನಲ್ಲಿ ಎರಡು ಸಾವಿರ ರೂ. ಸಾಲ ಪಡೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ವಂಚಕರ ನಗ್ನ ಸಂದೇಶ ಬೆದರಿಕೆಗೆ ಆತಂಕಗೊಂಡು 15 ಲಕ್ಷ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿಯ ಅಜ್ಮತ್ ಉಲ್ಲಾ(37) ಎಂಬಾತ ಆನ್ಲೈನ್ ಮ್ಯಾಜಿಕ್ ಲೋನ್ ಆ್ಯಪ್ನಲ್ಲಿ ಎರಡು ಸಾವಿರ ರೂ. ಸಾಲ ಪಡೆದಿದ್ದ. ಬಳಿಕ ಬಡ್ಡಿ ಸೇರಿ ಒಟ್ಟು3,500 ರೂ.ಗಳನ್ನು ಮರು ಪಾವತಿ ಮಾಡಿದ್ದಾರೆ. ಆದರೆ ಲೋನ್ ಅಪ್ಲಿಕೇಶನ್ ಆನ್ಲೈನ್ ವಂಚಕರು ಆಧಾರ್ ಕಾರ್ಡ್ ಮತ್ತು ಪಾನ್ಕಾರ್ಡ್ ದುರುಪಯೋಗಪಡಿಸಿಕೊಂಡು 20ಕ್ಕೂ ಅಧಿಕ ಲೋನ್ ಅಪ್ಲಿಕೇಷನ್ಗಳ ಮೂಲಕ ಬೆದರಿಸಿ 15 ಲಕ್ಷ ರೂ.ಗೂ ಅಧಿಕ ಹಣವನ್ನು ಪಡೆದುಕೊಂಡಿದ್ದಾರೆ.
ಅಜ್ಮತ್ ಫೋಟೋ ಬಳಸಿ ಮಹಿಳೆಯರ ಜೊತೆ ನಗ್ನವಾಗಿರುವಂತೆ ಬಿಂಬಿಸಿ ಆ ಫೋಟೋಗಳನ್ನು ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಭಯಗೊಂಡ ಅಜ್ಮತ್ ಲಕ್ಷಾಂತರ ರೂ. ಸಾಲ ಮಾಡಿ ವಂಚಕರ ಖಾತೆಗೆ ವರ್ಗಾಯಿಸಿದ್ದಾನೆ. ಬಳಿಕ ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಆನ್ಲೈನ್ ಅಪ್ಲಿಕೇಷನ್ ಒಂದರಲ್ಲಿ ಚಿಂತಾಮಣಿ ಟಿಪ್ಪು ನಗರದ ವ್ಯಕ್ತಿಯೊಬ್ಬ 2 ಸಾವಿರ ರೂ. ಸಾಲ ಪಡೆದಿದ್ದ. ವಂಚಕರ ನಗ್ನ ಸಂದೇಶ ಬೆದರಿಕೆಗೆ ಭಯಪಟ್ಟು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.