ನವದೆಹಲಿ, ಆ 14 (DaijioworldNews/HR): ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪೊಲೀಸ್ ಇಲಾಖೆಗೆ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿ ಕರ್ನಾಟಕದ 18 ಮಂದಿ ಅಧಿಕಾರಿಗಳು ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ಬಾರಿ ದೇಶದ ಒಟ್ಟು 347 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು, 87 ಮಂದಿ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಒಟ್ಟು 648 ಮಂದಿಯ ಸೇವೆಗೆ ಪ್ರಶಂಸನೀಯ ಪ್ರಶಸ್ತಿ ಲಭಿಸಿದ್ದು, ರಾಷ್ಟ್ರಪತಿ ಪ್ರಶಸ್ತಿಗೆ ಕರ್ನಾಟಕದ 18 ಮಂದಿ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಅರ್ಹರಾಗಿದ್ದಾರೆ.
ಪೊಲೀಸ್ ಅಧಿಕಾರಿಗಳಾದ ಪಿಟಿಎಸ್ ಎಸ್ ಪಿ ನಂಜಪ್ಪ ಶ್ರೀನಿವಾಸ್, ಡಿ ವೈ ಎಸ್ ಪಿಗಳಾದ ಪ್ರತಾಪ್ ಸಿಂಗ್ ತುಕಾರಾಮ್, ನಂಬೂರ ಶ್ರೀನಿವಾಸ್ ರೆಡ್ಡಿ, ನರಸಿಂಹ ಮೂರ್ತಿ ಪಿಳ್ಳಮುನಿಯಪ್ಪ, ಆರ್.ಪ್ರಕಾಶ್, ಎಸಿಪಿ ಟಿ.ಎಂ.ಶಿವಕುಮಾರ್, ಜಾಕೀರ್ ಹುಸೇನ್, ರಾಘವೇಂದ್ರ ರಾವ್, ಪಿಐ ರಾಜು ಚಿಕ್ಕಹನುಮೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಡಿ.ಬಿ.ಪಾಟೀಲ್, ಇನ್ಸ್ ಪೆಕ್ಟರ್ ಮೊಹಮ್ಮದ್ ಅಲಿ, ರವಿ ಬೆಳವಾಡಿ, ಸ್ಪೆಷಲ್ ಆರ್ ಪಿ ಐ ಮುಪೀದ್ ಖಾನ್, ಸ್ಪೆಷಲ್ ಎ ಆರ್ ಎಸ್ ಐ ಮುರಳಿ ರಾಮಕೃಷ್ಣ, ಎ ಆರ್ ಎಸ್ ಐ ಮಹದೇವಯ್ಯ, ಎ ಎಸ್ ಐ ಡಿ.ಬಿ. ಶಿಂಧೆ, ರಂಜಿತ್ ಶೆಟ್ಟಿ, ಬಿ. ಬಸವರಾಜು ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.