ಪುಣೆ,, ಆ 14 (DaijiworldNews/DB): ಏಕತೆಯಲ್ಲಿ ಮುಂದೆ ಸಾಗುವುದು ಹೇಗೆಂಬುದನ್ನು ನಮ್ಮನ್ನು ನೋಡಿ ಜಗತ್ತು ಕಲಿಯಬೇಕಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗರಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಉತ್ತಿಷ್ಟ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನಾವು ನೋಡಲು ವಿಭಿನ್ನವಾಗಿದ್ದೇವೆ. ಭಿನ್ನ ಆಹಾರಗಳನ್ನು ಸೇವಿಸುತ್ತೇವೆ. ಆದರೆ ಸುಭದ್ರವಾದ ಐಕ್ಯತೆ ನಮ್ಮಲ್ಲಿದೆ ಎಂದರು.
ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರತಿಜ್ಞೆ ಕೈಗೊಳ್ಳಬೇಕು. ದೇಶದ ಹಿರಿಮೆ ಔನತ್ಯಕ್ಕೇರಲು ನಮ್ಮೆಲ್ಲರ ತೊಡಗಿಸಿಕೊಳ್ಳುವಿಕೆ ಅತೀ ಮುಖ್ಯವಾಗಿದೆ. ಭಾರತಕ್ಕಾಗಿ ಜೀವನ ಮುಡಿಪಾಗಿಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.