ಬೆಂಗಳೂರು, ಆ 14 (DaijioworldNews/HR): ಆಗಸ್ಟ್ 15ರ ಮಧ್ಯಾಹ್ನ ನಡೆಯಲಿರುವ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಈಗಾಗಲೇ 90000 ಮಂದಿ ರಿಜಿಸ್ಟರ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ದಿನಗಳಲ್ಲಿ ಬೆಳಗ್ಗೆ ಎದ್ದು ಕಾಫಿ ಕುಡಿಯುವ ಮೊದಲು ಎಷ್ಟು ಜನ #FreedomMarch ನಲ್ಲಿ ಭಾಗಿಯಾಗಲು ರಿಜಿಸ್ಟರ್ ಮಾಡಿದ್ದಾರೆ ಎನ್ನುವುದನ್ನು ಚೆಕ್ ಮಾಡ್ತಿದ್ದೇನೆ. ಈ ದಿನ ಕೂಡ ನನಗೆ ನಿರಾಶೆಯಾಗಿಲ್ಲ. 90000+ ಮಂದಿ ರಿಜಿಸ್ಟರ್ ಮಾಡುವ ಮೂಲಕ ನಮ್ಮನ್ನು ಯಶಸ್ಸಿ ನ ಬಾಗಿಲಿಗೆ ತಂದು ನಿಲ್ಲಿಸಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.