ಮುಂಬೈ, ಆ 14 (DaijiworldNews/DB): ಶಿವಸಂಗ್ರಾಮ್ ಮುಖ್ಯಸ್ಥ ಹಾಗೂ ಮಾಜಿ ಸಚಿವ ವಿನಾಯಕ್ ಮೇಟೆ ಅವರು ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಇಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನೊಪ್ಪಿದ್ದಾರೆ.
ಮುಂಜಾನೆ 5.30ರ ಸುಮಾರಿಗೆ ಪನ್ವೇಲ್ ಬಳಿಯ ಮಂದಪ್ ಸುರಂಗದ ಬಳಿ ದುರಂತ ಸಂಭವಿಸಿದೆ. ಮೇಟೆ ಅವರು ಎಸ್ಯುವಿ ಕಾರಿನಲ್ಲಿ ಮರಾಠಾ ಮೀಸಲಾತಿ ಕುರಿತು ಚರ್ಚೆಗಾಗಿ ಇವರು ಮುಂಬೈಗೆ ಸಂಚರಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಮೇಟಿ ಅವರ ತಲೆ, ಕುತ್ತಿಗೆ, ಕೈಕಾಲುಗಳಿಗೆ ಗಂಭೀರ ಗಾಯವಾಗಿತ್ತು. ತತ್ಕ್ಷಣ ಅವರನ್ನು ಎಂಜಿಎಂ (ಮಹಾತ್ಮ ಗಾಂಧಿ ಮಿಷನ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಅಪಘಾತದಲ್ಲಿ ಮೇಟಿ ಅವರ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವರು ಆಸ್ಪತ್ರೆಗೆ ಆಗಮಿಸಿದರು.