ವಿಜಯಪುರ, ಆ 14 (DaijioworldNews/HR): ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗೆ ಚಿಕನ್ ಪೀಸ್ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂದು ಗುರುತಿಸಲಾಗಿದೆ.
ಪ್ರಜ್ವಲ ಗಾಂಜಾವನ್ನು ಕೈದಿ ಶಾರುಕ್ಬಾನ್ ತೆಗರತಿಪ್ಪಿಗೆ ಚಿಕನ್ ಪೀಸ್ನಲ್ಲಿ ಸಾಗಿಸುವಾಗ ಪೊಲೀಸರು ಗಾಂಜಾ ವಶಕ್ಕೆ ಪಡೆದಿದ್ದು, ಘಟನೆ ಸಂಬಂಧಿಸಿ ದೊಡ್ಡ ದೊಡ್ಡ ಚಿಕನ್ ಪೀಸ್ನಲ್ಲಿ 2 ಗ್ರಾಂನಷ್ಟು ಒಟ್ಟು 18 ಗಾಂಜಾ ಪ್ಯಾಕೆಟ್ನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.