ದೆಹಲಿ, ಆ 14 (DaijioworldNews/HR): ಹಿರಿಯ ಖ್ಯಾತ ಷೇರು ಉದ್ಯಮಿ ರಾಕೇಶ್ ಜುಂಜುನ್ವಾಲಾ(62) ಇಂದು ಬೆಳಿಗ್ಗೆ ನಿಧನರಾಗಿದ್ದು, ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಿಗ್ಗೆ 6:45 ಕ್ಕೆ ಹೃದಯಘಾತ ಸಂಭವಿಸಿದ್ದು, ಬಳಿಕ ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ಕರೆತರಲಾಗಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮೋದಿ, ರಾಕೇಶ್ ಜುಂಜುನ್ ವಾಲಾ ಅವರು ಅದಮ್ಯ ವ್ಯಕ್ತಿಯಾಗಿದ್ದರು. ಜೀವನ, ಹಾಸ್ಯಭರಿತ ವ್ಯಕ್ತಿತ್ವವನ್ನು ಹೊಂದಿದ್ದರು. ಇವರು ದೇಶದ ಆರ್ಥಿಕ ಅಪಾರ ಕೊಡುಗೆ ನೀಡಿದ್ದಾರೆ. ಅವರು ಭಾರತದ ಪ್ರಗತಿಯ ಬಗ್ಗೆ ಬಹಳ ಉತ್ಸುಕರಾಗಿದ್ದರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ.