ನವದೆಹಲಿ, ಆ 13 (DaijiworldNews/HR): ಮಂಕಿಪಾಕ್ಸ್ ಹೆಸರಿನ ಕುರಿತಾದ ಹಲವಾರು ವಿರೋಧಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ವೈರಸ್ನ ರೂಪಾಂತರಗಳಿಗೆ ಹೊಸ ಹೆಸರುಗಳನ್ನು ಘೋಷಿಸಿದೆ ಎಂದು ವರದಿಯಾಗಿದೆ.
ಈ ಸಂಬಂಧ ಡಬ್ಲ್ಯುಎಚ್ಒ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮಂಕಿಪಾಕ್ಸ್ ವೈರಸ್ನ ರೂಪಾಂತರಗಳನ್ನು ಕ್ಲೇಡ್ಸ್ 1, ಐಎ ಮತ್ತು ಐಐಬಿ ಎಂದು ಹೆಸರಿಸಿದೆ.
ಇನ್ನು ಯಾವುದೇ ಸಾಂಸ್ಕೃತಿಕ, ಸಾಮಾಜಿಕ, ರಾಷ್ಟ್ರೀಯ, ಪ್ರಾದೇಶಿಕ, ವೃತ್ತಿಪರ ಅಥವಾ ಜನಾಂಗೀಯ ಗುಂಪುಗಳಿಗೆ ಅಪರಾಧವನ್ನು ಉಂಟುಮಾಡುವುದನ್ನು ತಪ್ಪಿಸಲು ಮತ್ತು ವ್ಯಾಪಾರ, ಪ್ರಯಾಣ, ಪ್ರವಾಸೋದ್ಯಮ ಅಥವಾ ಪ್ರಾಣಿಗಳ ಕಲ್ಯಾಣದ ಮೇಲೆ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಹೊಸದಾಗಿ ಗುರುತಿಸಲಾದ ವೈರಸ್ಗಳು, ಸಂಬಂಧಿತ ರೋಗಗಳು ಮತ್ತು ವೈರಸ್ ರೂಪಾಂತರಗಳಿಗೆ ಹೆಸರುಗಳನ್ನು ನೀಡಲಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿಕೆಯಲ್ಲಿ ತಿಳಿಸಿದೆ.