ನವದೆಹಲಿ, ಆ 13 (DaijiworldNews/HR): 2023ರ ಡಿಸೆಂಬರ್ ವೇಳೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಸುಲ್ತಾನ್ಪುರವು ಅಯೋಧ್ಯೆಗೆ ಹತ್ತಿರವಿರುವುದರಿಂದ, ಮುಂದಿನ ವರ್ಷ ಡಿಸೆಂಬರ್ನಲ್ಲಿ ಶ್ರೀ ರಾಮ್ ಲಲ್ಲಾ ಅವರ ದರ್ಶನ ಪಡೆಯಲು ಈ ಸ್ಥಳದ ಜನರಿಗೆ ನಾನು ಆಹ್ವಾನ ನೀಡುತ್ತಿದ್ದೇನೆ' ಎಂದರು.
ಇನ್ನು ನಿರ್ಮಾಣ ಕಾರ್ಯವು ಉತ್ತಮ ವೇಗದಲ್ಲಿ ನಡೆಯುತ್ತಿದ್ದು, 2023 ರ ಡಿಸೆಂಬರ್ ನಲ್ಲಿ ಭಕ್ತರಿಂದ ದರ್ಶನಕ್ಕೆ ದೇವಾಲಯ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.