ಕೊಡಗು, ಆ 13 (DaijiworldNews/DB): ತ್ರಿಕೋನ ಪ್ರೇಮಕಥೆ ಪ್ರಕರಣದಲ್ಲಿ ಯುವಕನೊಬ್ಬ ಇಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ಚಾಕುವಿನಲ್ಲಿ ಇರಿದ ಘಟನೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.
ವಿದ್ಯಾರ್ಥಿಗಳಾದ ಸೋನಿಕಾ, ಪ್ರವೀಣ್ ಗಾಯಗೊಂಡವರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೂರಿ ಇರಿದ ಆರೋಪಿ ವಿಜಯ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುವಕ ಮತ್ತು ಯುವತಿ ಕಾವೇರಿ ನಿಸರ್ಗಧಾಮಕ್ಕೆ ಜೋಡಿಯಾಗಿ ಬಂದಿದ್ದ ವೇಳೆ ಆರೋಪಿ ವಿಜಯ್ ಸ್ಥಳಕ್ಕೆ ಬಂದು ಇಬ್ಬರಿಗೂ ಚಾಕು ಇರಿದಿದ್ದಾನೆ. ತ್ರಿಕೋನ ಪ್ರೇಮಕಥೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಆರೋಪಿ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿಸರ್ಗಧಾಮದ ಒಳಗೆ ಚಾಕು ಇರಿಸಿಕೊಂಡು ತೆರಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಸರ್ಗಧಾಮದಲ್ಲಿ ಪ್ರವಾಸಿಗರ ಎದುರೇ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.