ನವದೆಹಲಿ, ಆ 13 (DaijiworldNews/DB): ಪ್ರಧಾನಿ ಹುದ್ದೆ ಖಾಲಿ ಇಲ್ಲ. ಆದರೆ ವಿರೋಧ ಪಕ್ಷಗಳು ಪ್ರಧಾನಿ ಅಭ್ಯರ್ಥಿಗಳ ಎರಡು ಡಜನ್ 'ವೇಯ್ಟಿಂಗ್ ಲಿಸ್ಟ್' ತಯಾರಿಸಿಟ್ಟುಕೊಂಡಿವೆ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಮೋದಿ ಫೋಬಿಯಾದ ರಾಜಕೀಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹವರು ಶೀಘ್ರ ರಾಜಕೀಯದಿಂದ ಇಲ್ಲವಾಗಲಿದ್ದಾರೆ. ಮೋದಿಯವರ ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಿರೋಧ ಪಕ್ಷಗಳ ರಾಜಕೀಯ ಅಸಹಿಷ್ಣುತೆ, ಸುಳ್ಳು ಆರೋಪಗಳನ್ನು ಲೆಕ್ಕಿಸದೆ ಮೋದಿ ದೇಶಕ್ಕಾಗಿ, ಜನರಿಗಾಗಿಕೆಲಸ ಮಾಡುತ್ತಿದ್ದಾರೆ. ದೇಶದ ಭದ್ರತೆ, ಘನತೆ, ರಾಷ್ಟ್ರನೀತಿ ಮತ್ತು ದೇಶವಾಸಿಗಳ ಕಲ್ಯಾಣವೇ ಮೋದಿಯವರ ರಾಷ್ಟ್ರಧರ್ಮ ಎಂದು ನಖ್ವಿ ಬಣ್ಣಿಸಿದರು.