ಹಾಸನ, ಆ 13 (DaijiworldNews/HR): ಪತ್ನಿ ಜೀವನಾಂಶ ಕೋರಿ ಕೋರ್ಟ್ ಮೊರೆ ಹೋಗಿದ್ದಕ್ಕೆ ಆಕ್ರೋಶಗೊಂಡ ಪತಿ ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಕೋರ್ಟ್ ಆವರಣದ ಶೌಚಾಯಲಕ್ಕೆ ಪತ್ನಿ ಚೈತ್ರ ತೆರಳಿದ ವೇಳೆ ಹೊಂಚು ಹಾಕಿ ಕೂತ್ತಿದ್ದ ಪತಿ ಶಿವಕುಮಾರ್ ಆಕೆಯ ಕತ್ತುಕೊಯ್ದು ಕೃತ್ಯವೆಸಗಿದ್ದಾನೆ.
ಇನ್ನು ಸಾವು ಬದುಕಿನ ಹೋರಾಡುತ್ತಿದ್ದ ಗಾಯಾಳು ಚೈತ್ರಳನ್ನು ಹೊಳೆನರಸೀಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಹೊಳೆನರಸೀಪುರ ಟೌನ್ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.