ನವದೆಹಲಿ, ಆ 13 (DaijiworldNews/DB): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎರಡನೇ ಬಾರಿ ಕೋವಿಡ್ -19 ಸೋಂಕು ಬಾಧಿಸಿದ್ದು, ಸದ್ಯ ಅವರು ಐಸೋಲೇಶನ್ನಲ್ಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಸೋನಿಯಾ ಗಾಂಧಿ ಅವರಿಗೆ ಇಂದು ಕೋವಿಡ್ -19 ಪಾಸಿಟಿವ್ ಬಂದಿದೆ ಎಂದು ದೃಢಪಡಿಸಿದ್ದಾರೆ.
ಸದ್ಯ ಸೋನಿಯಾ ಗಾಂಧಿಯವರು ಐಸೋಲೇಶನ್ನಲ್ಲಿದ್ದಾರೆ ಸರ್ಕಾರದ ಶಿಷ್ಟಾಚಾರದ ಪ್ರಕಾರ ಅವರು ಕೆಲವು ದಿನಗಳ ಕಾಲ ಪ್ರತ್ಯೇಕವಾಗಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.