ರಾಯಚೂರು, ಆ 13 (DaijiworldNews/DB): ಸಿದ್ದರಾಮಯ್ಯನವರದ್ದು ಗಿಮಿಕ್ ರಾಜಕಾರಣ. ಅಂತಹ ಗಿಮಿಕ್ಗಳನ್ನು ರಾಜ್ಯದ ಜನರು ಒಪ್ಪುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಬೆಳೆದಿರುವುದೇ ಗಿಮಿಕ್ ರಾಜಕಾರಣದ ಮುಖಾಂತರ. ಆದರೆ ಅದೆಲ್ಲ ಜನರಿಗೆ ಅರಿವಿದೆ. ಅಂತಹ ಗಿಮಿಕ್ ರಾಜಕಾರಣವನ್ನು ಯಾವತ್ತೂ ಜನರು ಒಪ್ಪುವುದಿಲ್ಲ ಎಂದರು.
ಸಿಎಂ ಬದಲಾವಣೆಯಾಗುತ್ತಾರೆಂದು ಯಾರು ಹೇಳಿದ್ದು? ಕಾಂಗ್ರೆಸ್ನವರು ಸಿಎಂ ಬದಲಾವಣೆ ಮಾಡುವವರಾ? ಸುಳ್ಳು ಟ್ವೀಟ್ ಮಾಡಿ ವೃಥಾ ಜನರನ್ನು ಗೊಂದಲಕ್ಕೆ ದೂಡುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಹಾಗೆ ಟ್ವೀಟ್ ಮಾಡಲು ಅವರು ಯಾರು ಎಂದು ಪ್ರಶ್ನಿಸಿದರು.
ಗಿಮಿಕ್ಗಳನ್ನು ಮಾಡಿ ಬೆಳೆಯಬೇಕು ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಆದರೆ ಅದು ಸಾಧ್ಯವಾಗದು ಎಂದವರು ಇದೇ ವೇಳೆ ತಿಳಿಸಿದರು.