ಬೆಂಗಳೂರು, ಆ 12 (DaijiworldNews/DB): ಮೂರು ದಶಕಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ನನಗೆ ಬೆದರಿಕೆಯೊಡ್ಡಿ ಹಣ ಪಡೆದಿದ್ದರು ಎಂಬುದಾಗಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ನಡುವೆ ನಡೆಯುತ್ತಿರುವ ವಾಕ್ಸಮರದ ಬೆನ್ನಲ್ಲೇ ಈ ಹೇಳಿಕೆ ನೀಡಿದ ಸಿ.ಪಿ. ಯೋಗೇಶ್ವರ್, ಎಚ್ಡಿಕೆ ಅಂದು ನನಗೆ ಬೆದರಿಕೆ ಹಾಕಿ ಹಣ ಪಡೆದಿದ್ದರು. ಈಗ ನನ್ನ ವಿರುದ್ದ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದರು.
ರಾಜಕೀಯ ಕಾರಣಕ್ಕಾಗಿ ಎಚ್ಡಿಕೆ ಎಲ್ಲರನ್ನೂ ಟೀಕಿಸುತ್ತಿದ್ದಾರೆಯೇ ಹೊರತು ಯಾರನ್ನೂ ಬೆಳೆಯಲು ಬಿಡುವುದಿಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಅವರು ನೈಸ್ ಕಂಪನಿಗೆ ನನ್ನ ಜಾಗವನ್ನು ಸ್ವಾಧೀನ ಮಾಡಿಸಿದ್ದರು ಎಂದು ಆಪಾದಿಸಿದ್ದಾರೆ.
ಯೋಗೇಶ್ವರ್ ಏನು ತೆಂಗಿನ ಕಾಯಿ ವ್ಯಾಪಾರಿನಾ? ನೀರಾವರಿ ತಜ್ಞನಾ? ಎಂದು ನನ್ನ ಬಗ್ಗೆ ಈಗ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಇದೇ ಪ್ರಶ್ನೆಯನ್ನು ನಾನೂ ಅವರಿಗೆ ಕೇಳಬಹುದು ಎಂದರು.