ಬಿಡದಿ, ಆ 12 (DaijiworldNews/DB): ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಮನೆಗಳ ಮೇಲೆ ಕನ್ನಡದ ಬಾವುಟ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಬಲ ವ್ಯಕ್ತಪಡಿಸಿದ್ದು, ತಮ್ಮ ತೋಟದ ಮನೆ ಮೇಲೆ ಕನ್ನಡ ಬಾವುಟ ಹಾರಿಸಿದ್ದಾರೆ.
ಕೇತಗಾನಹಳ್ಳಿಯ ತೋಟದ ಮನೆಯ ಮೇಲೆ ಎಚ್ಡಿಕೆ ಕನ್ನಡದ ಬಾವುಟ ಹಾರಿಸಿದ್ದಾರೆ. ಆ. 9ರಂದು ಭಾರತದ ಒಕ್ಕೂಟಕ್ಕೆ ಮೈಸೂರು ಸಂಸ್ಥಾನ ಸೇರ್ಪಡೆಯಾದ ಐತಿಹಾಸಿಕ ದಿನವಾಗಿದ್ದು, ಇದರ ಅಂಗವಾಗಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನವನ್ನು ಕನ್ನಡಪರ ಸಂಘಟನೆಗಳು ಕೈಗೊಂಡಿದ್ದವು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೂಡಾ ತಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಎಚ್. ಡಿ. ಕುಮಾರಸ್ವಾಮಿಯವರು ಇದೇ ವೇಳೆ ಮನವಿ ಮಾಡಿದ್ದಾರೆ.