ಆನೇಕಲ್, ಆ 12 (DaijiworldNews/HR): ಕುಡಿದ ಅಮಲಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಾ ಹುಲ್ಲಹಳ್ಳಿಯ ಕ್ರೈಸ್ಟ್ ಕಾಲೇಜಿನ 7 ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದು, ಕಾರು ಕೆರೆಗೆ ಪಲ್ಟಿಯಾದ ಘಟನೆ ಸಂಭವಿಸಿದೆ.
ಕಾರಿನಲ್ಲಿ ಅತಿವೇಗವಾಗಿ ಕೆರೆಯ ಕಟ್ಟೆ ಮೇಲೆ ಕಾರನ್ನು ವಿದ್ಯಾರ್ಥಿಗಳು ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಕಾರು ಕೆರೆಗೆ ಪಲ್ಟಿಯಾಗಿದೆ.
ಇನ್ನು ಕಾರಿನಲ್ಲಿದ್ದ 7 ಜನರ ಪೈಕಿ ಇಬ್ಬರು ಘಟನೆ ಸಂಭವಿಸುತ್ತಿದ್ದಂತೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಐವರನ್ನು ರಕ್ಷಿಸಲಾಗಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.