ನವದೆಹಲಿ, ಆ 12 (DaijiworldNews/MS): ತೀರ್ಪುಗಳು ಮತ್ತು ನ್ಯಾಯಾಲಯ ಪ್ರಕ್ರಿಯೆಗಳ ನಿಖರ ವರದಿಗಾರಿಕೆಯ ಇತ್ತೀಚಿಗಿನ ಅಗತ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಈಸ್ಟರ್ನ್ ಬುಕ್ ಕಂಪನಿಯ ಸುಪ್ರೀಂ ಕೋರ್ಟ್ ಕೇಸಸ್ (ಎಸ್ಸಿಸಿ) ಪ್ರಿ ’69 ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಈಗ ನಮ್ಮಲ್ಲಿ 24x7 ಚಾನೆಲ್ಗಳಿದ್ದು ನಾವು ಒಂದು ವಾಕ್ಯವನ್ನು ಪೂರ್ಣಗೊಳಿಸುವ ಮುನ್ನವೇ ಬ್ರೇಕಿಂಗ್ ನ್ಯೂಸ್ಗಳನ್ನು ನೋಡುತ್ತಿದ್ದೇವೆ. ಹೀಗಾಗಿ ನಿಖರವಾದ ವರದಿ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಜನರು ಗೊಂದಲಕ್ಕೊಳಗಾಗುತ್ತಾರೆ," ಎಂದು ಹೇಳಿದ್ದಾರೆ.
ದೇಶದ ಜನರು ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಕಾನೂನು ಹೇಗೆ ನಿರ್ಧರಿಸಲ್ಪಡುತ್ತದೆ, ಹೇಗೆ ಅದನ್ನು ಅನ್ವಯಿಸಲಾಗುತ್ತದೆ ಎನ್ನುವುದನ್ನು ಅವರು ಅರಿಯಲು ಸಾಧ್ಯವಾಗಬೇಕು ಎಂದು ಇದೇ ವೇಳೆ ಸಿಜೆಐ ಒತ್ತಿ ಹೇಳಿದ್ದಾರೆ.
ಈಗ ನಮ್ಮಲ್ಲಿ 24x7 ಚಾನೆಲ್ಗಳಿವೆ. ವಾಕ್ಯವನ್ನು ಪೂರ್ಣಗೊಳಿಸುವ ಮುನ್ನವೇ ಬ್ರೇಕಿಂಗ್ ನ್ಯೂಸ್ಗಳನ್ನು ನೋಡುತ್ತಿದ್ದೇವೆ. ನಿಖರವಾದ ವರದಿ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಜನರು ಗೊಂದಲಕ್ಕೊಳಗಾಗುತ್ತಾರೆ," ಎಂದು ಅವರು ಹೇಳಿದ್ದಾರೆ.
"ಬಹುತೇಕ ವರದಿಗಳಲ್ಲಿ ಆದೇಶ, ಪ್ರಕ್ರಿಯೆ, ತೀರ್ಪು, ಮೌಖಿಕ ಅವಲೋಕನಗಳ ನಡುವಿನ ವ್ಯತ್ಯಾಸ ಕಂಡುಬರುವುದಿಲ್ಲ. ಇದು ತುಂಬಾ ದುರದೃಷ್ಟಕರ. ನ್ಯಾಯಾಧೀಶರು ನಕಾರಾತ್ಮಕ ಪ್ರಶ್ನೆ ಕೇಳಿದರೆ, ತಕ್ಷಣವೇ ಅದನ್ನು ವರದಿ ಮಾಡಲಾಗುತ್ತದೆ" ಎಂದು ಅವರು ಬೇಸರಿಸಿದ್ದಾರೆ.