ಚಿಕ್ಕಬಳ್ಳಾಪುರ, ಆ 12 (DaijiworldNews/HR): ಬಾಯಿ ಮುಚ್ಚಿಕೊಂಡು ಇರದೇ ಇದ್ದರೇ. ನಿನ್ನ ಎಲ್ಲಾ ಕತೆಯನ್ನು ಬಿಚ್ಚಿಡೋದಾಗಿ ಸಚಿವ ಸುಧಾಕರ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದರು ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಟಿಕೆಟ್ ಕೊಡಿಸಿದ್ದೇ ಚುನಾವಣೆಗೆ ನಿಲ್ಲೋದಕ್ಕೆ ನಾನು. ಅವರ ಇನ್ನೂ ಹಲವು ವಿಚಾರಗಳು ನನಗೆ ಗೊತ್ತು. ಈಗ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲ ಅಂದ್ರೇ ಎಲ್ಲಾ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಇನ್ನು ನಾನು ಸಮಯ ಬಂದಾಗ ಸುಧಾಕರ್ ಬಗ್ಗೆ ಮಾತನಾಡುತ್ತೇನೆ. ಈಗ ಹೆಚ್ಚು ಏನೂ ಹೇಳುವುದಿಲ್ಲ. ಮುಂಬರುವಂತ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಧಾಕರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಹಾಕಲಿದ್ದೇವೆ ಎಂದು ಹೇಳಿದ್ದಾರೆ.