ನವದೆಹಲಿ, ಆ 12 (DaijiworldNews/MS): ಬಾಲಿವುಡ್ ನ ಹಾಸ್ಯ ನಟ, ರಾಜು ಶ್ರೀವಾಸ್ತವ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ರಾಜು ಅವರು ಬುಧವಾರ ಬೆಳಗ್ಗೆ ಜಿಮ್ನಲ್ಲಿ ಟ್ರೆಡ್ಮಿಲ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು ಕೂಡಲೇ ಅವರ ತರಬೇತುದಾರರು ಅವರನ್ನು ಏಮ್ಸ್ ಗೆ ಕರೆದೊಯ್ದಿದು ದಾಖಲಿಸಿದ್ದರು.
ಹೃದಯ ಸ್ತಂಭನದ ಸಮಯದಲ್ಲಿ ರಾಜು ಅವರ ಮೆದುಳಿಗೆ ತೀವ್ರ ಹಾನಿಯಾಗಿದೆ. ಸದ್ಯ ಅವರು ವೆಂಟಿಲೇಟರ್ನಲ್ಲಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿಲ್ಲ' ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಐಸಿಯುನಲ್ಲಿ ಜೀವ ಬೆಂಬಲ ವ್ಯವಸ್ಥೆಯಲ್ಲಿದ್ದಾರೆ. ಡಾ.ನಿತೀಶ್ ನಾಯ್ಕ್ ನೇತೃತ್ವದಲ್ಲಿ ಶ್ರೀವತ್ಸ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.