ಅಗರ್ತಲಾ, ಆ 12 (DaijiworldNews/MS): ಮಾಜಿ ಆರೋಗ್ಯ ಸಚಿವ ಮತ್ತು ತ್ರಿಪುರದ ಏಕೈಕ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಅವರ ಮೇಲೆ ಎರಡು ತಿಂಗಳೊಳಗೆ ಎರಡನೇ ದಾಳಿ ಇದಾಗಿದೆ.
ಶಾಸಕ ಸುದೀಪ ಮತ್ತು ಕಾಂಗ್ರೇಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸುಶಾಂತ ಚಕ್ರವರ್ತಿ ಸೇರಿದಂತೆ ಇತರೆ ನಾಲ್ವರು ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ .ಗಾಯಗೊಂಡಿರುವ ಶಾಸಕ ರಾಯ್ ಬರ್ಮನ್ ಮತ್ತು ಚಕ್ರವರ್ತಿ, ಮಹಿಳಾ ಘಟಕದ ನಾಯಕಿ ಸುಮನಾ ಸಹಾಅವರನ್ನು ಇಲ್ಲಿನ ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ.ದಾಳಿಯ ವೇಳೆ ಕನಿಷ್ಠ 12 ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಭಾರತ್ ಜೋಡೋ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಅಗರ್ತಲಾದ ಪೂರ್ವಕ್ಕೆ 10 ಕಿಮೀ ದೂರದಲ್ಲಿರುವ ಜಿರಾನಿಯಾದ ರಣೀರ್ ಬಜಾರ್ನಲ್ಲಿ ಗುಂಪು ದಾಳಿ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಹಲವೆಡೆ ಎಂಟು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.ಬಿಜೆಪಿ ವಿರುದ್ದ ಕಾಂಗ್ರೇಸ್ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ ನ ಕಾನೂನು ಘಟಕವು ಪೊಲೀಸರಿಗೆ ದೂರು ನೀಡಿದೆ