ಮಂಡ್ಯ, ಆ 11 (DaijiworldNews/HR): ಕಾಂಗ್ರೆಸ್ ಮನಸ್ಸಿನಲ್ಲಿ ಅತಂತ್ರ ಇದೆ. ನಾನು ಸ್ಥಿತ ಪ್ರಜ್ಞೆಯಿಂದ ಇದ್ದೇನೆ. ಆದರೆ ಸತ್ಯ ಏನು ಎಂಬುವುದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಅವರದೇ ಪಕ್ಷದ ನಾಯಕರು ಸಾಕಷ್ಟು ಮುನ್ಸೂಚನೆ ನೀಡಿದ್ದಾರೆ. ಯತ್ನಾಳ್ ಅವರ ಪ್ರಕಾರವೇ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಬೇಕಾದರೆ 2500 ಕೋಟಿ ಹಣ ನೀಡಬೇಕು. ಬೊಮ್ಮಾಯಿ ಅವರ ನಂತರ ಮತ್ಯಾರೋ ಈ ಹಣ ಪಾವತಿಸಿರಬೇಕು. ಅದಕ್ಕಾಗಿ ಸಿಎಂ ಬದಲಾವಣೆಗೆ ಮುಂದಾಗಿರಬಹುದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ಮನಸ್ಸಿನಲ್ಲಿ ಅತಂತ್ರ ಇದೆ. ನಾನು ಸ್ಥಿತ ಪ್ರಜ್ಞೆಯಿಂದ ಇದ್ದೇನೆ. ಆದರೆ ಸತ್ಯ ಏನು ಎಂಬುವುದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಗೆ ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಟ್ವೀಟ್ ಬಳಿಕ ನಾನು ಇನ್ನಷ್ಟು ಬಲಗೊಂಡಿದ್ದೇನೆ. ಮುಂದೇನು ಆಗುತ್ತದೆ ನೋಡೋಣ ಎಂದು ಹೇಳಿದ್ದಾರೆ.