ಫಿರೋಜಾಬಾದ್, ಆ 11 (DaijiworldNews/HR): ಪೊಲೀಸ್ ಕಾನ್ಸ್ಟೇಬಲ್ ಜನರ ಗುಂಪು ಸೇರಿಸಿ ಪೊಲೀಸ್ ಮೆಸ್ನಲ್ಲಿ ಬಡಿಸಿದ ಊಟದ ತಟ್ಟೆಯನ್ನು ಹಿಡಿದು ಕಣ್ಣೀರು ಸುರಿಸಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾನು ಅನೇಕ ಬಾರಿ ಊಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲಸದಿಂದ ತೆಗೆದು ಹಾಕುವುದಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು. ಆದರೆ ದೀರ್ಘಾವಧಿ ಕರ್ತವ್ಯ ಮಾಡುವ ನಮಗೆ ಬಳುವಳಿಯಾಗಿ ಸಿಗುವುದು ಇದೇ ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಸರಿಯಾದ ಊಟ ನೀಡದಿದ್ದರೆ ಪೊಲೀಸ್ ಸಿಬ್ಬಂದಿ ಹೇಗೆ ತಾನೇ ಸರಿಯಾಗಿ ಕೆಲಸ ಮಾಡಲು ಸಾಧ್ಯ? ಎಂದು ಮನೋಜ್ ಪ್ರಶ್ನಿಸಿದ್ದು, ಪ್ರಾಣಿಗಳು ಕೂಡ ಇದನ್ನು ತಿನ್ನುವುದಿಲ್ಲ ಎಂದು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.