ನವದೆಹಲಿ, ಆ 11 (DaijiworldNews/DB): ಪ್ರಾದೇಶಿಕ ಮಿತ್ರ ಪಕ್ಷಗಳನ್ನು ಮುಗಿಸುವುದು ಬಿಜೆಪಿಯ ಗುರಿಯಾಗಿದೆ. ಅವರ ಪಕ್ಷ ಮಾತ್ರ ಉಳಿಯಬೇಕೆಂಬ ಉದ್ದೇಶ ಅವರದು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕುಟುಂಬ ಆಧರಿತ ಪಕ್ಷಗಳು ನಿರ್ನಾಮವಾಗಲಿದ್ದು, ಬಿಜೆಪಿ ರೀತಿ ಸಿದ್ದಾಂತ ಆಧರಿತ ಪಕ್ಷಗಳು ಮಾತ್ರ ಭವಿಷ್ಯದಲ್ಲಿ ಉಳಿಯಲಿವೆ ಎಂಬುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಹೇಳಿದ್ದರು. ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿರಬಾರದೆಂಬುದೇ ಅವರ ಉದ್ದೇಶ. ಅದಕ್ಕಾಗಿಯೇ ಅವರ ಪಕ್ಷ ಉಳಿಸಿ ಪ್ರಾದೇಶಿಕ ಮಿತ್ರ ಪಕ್ಷಗಳನ್ನು ನಿಧಾನವಾಗಿ ಮುಗಿಸುವುದಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸಖ್ಯ ತೊರೆದ ನಿತೀಶ್ ಕುಮಾರ್ ನಿಲುವು ಸ್ವಾಗತಾರ್ಹ ಎಂದವರು ತಿಳಿಸಿದರು.
ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಬಿಜೆಪಿ ಉದ್ದೇಶದ ಕುರಿತು ಈ ಹಿಂದೆ ನಿತೀಶ್ಕುಮಾರ್ ಕೂಡಾ ಆಪಾದನೆ ಮಾಡಿದ್ದರು ಎಂದರು.