ನವದೆಹಲಿ, ಆ 11 (DaijiworldNews/MS): ಇತ್ತೀಚೆಗೆ ಕಪ್ಪು ಬಟ್ಟೆ ತೊಟ್ಟು ಹೋರಾಟ ನಡೆಸಿದ್ದ ಕಾಂಗ್ರೆಸ್ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ "ಬ್ಲ್ಯಾಕ್ ಮ್ಯಾಜಿಕ್ " (ಕಾಲ ಜಾದು) ಹೇಳಿಕೆಗೆ ಕಾಂಗ್ರೆಸ್ ಬುಧವಾರ ತಿರುಗೇಟು ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ಮೋದಿಯವರು ಕಪ್ಪುವಸ್ತ್ರ ಧರಿಸುವ ಚಿತ್ರವನ್ನು ಹಂಚಿಕೊಂಡು, "ಪ್ರಧಾನಿಯವರು ಕಪ್ಪು ಬಟ್ಟೆಯ ಬಗ್ಗೆ ಅರ್ಥಹೀನ ವಿಷಯವನ್ನು ಮಾಡುತ್ತಿದ್ದಾರೆ " ಎಂದು ಟಾಂಗ್ ನೀಡಿದ್ದಾರೆ.
"ಕಪ್ಪು ಹಣ ತರುವ ವಿಚಾರವಾಗಿ ಅವರು ಏನನ್ನೂ ಮಾಡಲಿಲ್ಲ, ಈಗ ಅವರು ಕಪ್ಪು ಬಟ್ಟೆಯ ಬಗ್ಗೆ ಅರ್ಥಹೀನ ವಿಷಯ ಮಾಡುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದು ದೇಶ ಬಯಸುತ್ತದೆ, ಆದರೆ 'ಜುಮಲಜೀವಿ' ಏನಾದರೊಂದು ಹೇಳುತ್ತಲೇ ಇರುತ್ತಾರೆ" ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್ ನಲ್ಲಿ ಹೇಳಿದ್ದಾರೆ.
ಆಗಸ್ಟ್ 5 ರಂದು ಬೆಲೆ ಏರಿಕೆ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿರುವ ಬಗ್ಗೆ ವಾಗ್ದಾಳಿ ನಡೆಸಿದ್ದ ಪ್ರಧಾನಿ ,ಕೆಲವರು ಹತಾಶೆ ಮತ್ತು ನಕಾರಾತ್ಮಕತೆಯಲ್ಲಿ ಮುಳುಗಿರುವ ಹಿನ್ನಲೆ ಮಾಟ ಮಂತ್ರದ ಆಶ್ರಯ ಪಡೆಯಲಾರಂಭಿಸಿದ್ದಾರೆ. ಕಪ್ಪು ಬಟ್ಟೆ ತೊಟ್ಟ ತಕ್ಷಣ ತಮ್ಮ ಹತಾಶೆ ಎಲ್ಲಾ ಕೊನೆಯಾಗುತ್ತದೆ ಎಂದು ನಂಬಿದ್ದಾರೆ.